Thursday, May 22, 2014

ಮಕ್ಕಳ ಹಕ್ಕುಗಳ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

 

  ಮಕ್ಕಳಿಗಾಗಿ ಕೆಲಸ ಮಾಡುವ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಇರುವ ಹಲವಾರು ವ್ಯಕ್ತಿಗಳು ಮಕ್ಕಳ ಹಕ್ಕುಗಳ ಕುರಿತು ತರಬೇತಿಗಳನ್ನು ಪಡೆಯಬೇಕು, ಮಾಹಿತಿಗಳನ್ನು ತಿಳಿಯಬೇಕು ಎಂಬ ಆಸಕ್ತಿ ಇದ್ದರೂ, ಆಯೋಜಿಸಲು ಬೇಕಾಗಿರುವ ಹಣಕಾಸು ಕೊರತೆಯಿಂದಾಗಿಯೋ, ತರಬೇತಿ ನಡೆಸಿದರು ಬದಲಾಗುವ/ಹೊಸದಾಗಿ ಸಂಸ್ಥೆಗೆ ಸೇರುವ ಒಬ್ಬರಿಗೋ ಅಥವಾ ಇಬ್ಬರಿಗೋಸ್ಕರ ಮತ್ತೆ ತರಬೇತಿ ಆಯೋಜನೆ ಮಾಡಲು ಆಗುವ ತೊಂದರೆಯಿಂದಲೋ, ಸಮಯದ ಅಭಾವದಿಂದಾಗಿಯೋ, ತರಬೇತಿ ನೀಡಲು ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಕೊರತೆಯಿಂದಲೋ ಹೀಗೆ ಹಲವಾರು ಕಾರಣಗಳಿಂದ ತರಬೇತಿ ಪಡೆಯುವ ಅವಕಾಶದಿಂದ ವಂಚಿತರಾಗಿರುವವರಿಗೆಂದೇ ಹಮ್ಮಿಕೊಂಡ ಮಕ್ಕಳ ಹಕ್ಕುಗಳ ಸರಣಿ ತರಬೇತಿ ಕಾರ್ಯಾಗಾರಕ್ಕೆ ಬ್ರೆಡ್ಸ್ ಸಂಸ್ಥೆ ಯಲ್ಲಿಚಾಲನೆ ದೊರೆಯಿತು.  


ಸಿ ಆರ್ ಟಿ ಮತ್ತು ಬ್ರೆಡ್ಸ್ ಸಂಸ್ಥೆ ಯ ಸಹಯೋಗದೊಂದಿಗೆ ನಡೆಯುತ್ತಿರುವ ಮೊದಲ ಕಾರ್ಯಾಗಾರದಲ್ಲಿ ಬೆಂಗಳೂರು, ಕೋಲಾರ, ಚಾಮರಾಜನಗರ, ಬಳ್ಳಾರಿ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳ 29 ಮಂದಿ ಭಾಗಿಯಾಗಿದ್ದಾರೆ.

ಸರಣಿ ತರಬೇತಿಯ ಮುಂದಿನ ಕಾರ್ಯಾಗಾರ ಜೂನ್ 25 ರಂದು ಬ್ರೆಡ್ಸ್ ಸಂಸ್ಥೆ ಯಲ್ಲಿನಡೆಯಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 20, 2014, ಸಂಜೆ 4 ಘಂಟೆ. 


ಹೆಚ್ಚಿನ  ಮಾಹಿತಿಯನ್ನು ಈ  ಲಿಂಕ್ ನಲ್ಲಿ  ಪಡೆಯಿರಿ

 https://drive.google.com/file/d/0B7I3R19NsNYxUm1Ec0luWlhhNGc/edit?usp=sharing

No comments: